`ನಾನಿ` ತಂತ್ರಜ್ಞಾನ ಲೇಪನ
Posted date: 27 Mon, Jul 2015 – 08:33:55 AM

ತುಳಸಿ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ‘ನಾನಿ’ ಕನ್ನಡ ಸಿನಿಮಾಕ್ಕೆ ಚೆನ್ನೈ ನಗರದ ಪಿಕ್ಸೆಲ್ಲೈಟ್ ಸ್ಟುಡಿಯೋದಲ್ಲಿ? ಸಿ ಜಿ. (ಕಂಪ್ಯೂಟರ್ ಗ್ರಾಫಿಕ್ಸ್) ತಂತ್ರಜ್ಞಾನದ ಕೌಶಲ್ಯ ಶಿವ ಅವರ ನೇತೃತ್ತ್ವದಲ್ಲಿ ನಡೆಯುತ್ತಿದೆ. ತೆಲುಗು ಅಲ್ಲಿ ತಯಾರಾದ ಹೆಸರಾಂತ ಸಿನಿಮಾ ‘ಅರುಂಧತಿ’ ಸಿನಿಮಾಕ್ಕೆ ಸಿ ಜಿ ಕೆಲಸ ಮಾಡಿದ ಶಿವ ಅವರೇ ಕನ್ನಡದ ಈ ‘ನಾನಿ’ ಸಿನಿಮಾಕ್ಕೆ ಸಹ ತಂತ್ರಜ್ಞಾನದ ಸೊಬಗನ್ನು ನೀಡುತ್ತಿದ್ದಾರೆ. ಅರ್ಧ ಘಂಟೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಿ ಜಿ - ಎರಡು ತಿಂಗಳ ಶ್ರಮ ಬೇಡುತ್ತದೆ. ಅದಕ್ಕಾಗಿ ಹೆಚ್ಚು ತಂತ್ರಜ್ಞರನ್ನು ಬಳಸಿ ಶಿವ ಅವರು ಆಗಸ್ಟ್ ೨೦ ಒಳಗೆ ‘ನಾನಿ’ ಮೊದಲ ಪ್ರತಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಕೆಲವು ಅಘೋರಿಗಳ ಸನ್ನಿವೇಶಕ್ಕೆ ಹಿಮಾಲಯದ ಹಿನ್ನಲೆಯನ್ನು ಸಹ ಈ ಸಿ ಜಿ ಕೆಲಸದಲ್ಲಿ ಸಾಧ್ಯ ಮಾಡುತ್ತಿದ್ದಾರೆ ತಂತ್ರಜ್ಞ ಶಿವ.
 
೧೯೯೭ ರಲ್ಲಿ ನಡೆದ ಒಂದು ಸತ್ಯ ಘಟನೆ ಆಧಾರಿತ ಕನ್ನಡ ಸಿನಿಮಾ ‘ನಾನಿ’ ತುಳಸಿ ಫಿಲ್ಮ್ಸ್ ಅಡಿಯಲ್ಲಿ ತಾಯರಗುತ್ತಿರುವ ಐದನೇ ಚಿತ್ರ. ರಾಘವೇಂದ್ರ ಗೊಲ್ಲಹಳ್ಳಿ ಅವರ ಪ್ರಥಮ ಚಿತ್ರ, ೪೬ ದಿವಸಗಳ ಕಾಲ ಚಿತ್ರೀಕರಣ ಬೆಂಗಳೂರು, ಚಿಕ್ಕಮಗಳೂರು, ಮಡಿಕೇರಿ ಹಾಗೂ ಗುಜರಾತಿನಲ್ಲಿ ಮಾಡಿದ್ದಾರೆ.

ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರ ಕಥೆ ಒಳಗೊಂಡಿದೆ. ಗುಂಡುಲ್ಪೇಟ್ ಸುರೇಶ್ ಅವರ ಛಾಯಾಗ್ರಹಕ, ನುರಿತ ಬರೆಹಗಾರ ಬಿ ಎ ಮಧು ಅವರ ಸಂಭಾಷಣೆ ಇರುವ ‘ನಾನಿ’ ಚಿತ್ರಕ್ಕೆ ತ್ಯಾಗರಾಜ್ ಅವರ ಸಂಗೀತ ನಿರ್ದೇಶನ ಇದೆ. ತಮಿಳಿನ ‘ಆರಮಣಿ’ ಸಿನಿಮಾದ ಸಂಕಲನಕಾರ ಎಂ ಎಸ್ ಬಾಲ ಅವರು ಈ ಚಿತ್ರದ ಸಂಕಲನ ಮಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ, ರವಿ ಸಂತೆಹೈಕ್ಳು ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.
 
ನಾನಿ ಆಗಿ ಕುಮಾರಿ ಸುಹಾಸಿನಿ, ಅವಳ ಹೆತ್ತವರಾಗಿ ಸುಹಾಸಿನಿ ಮಣಿರತ್ನಂ ಹಾಗೂ ಜೈ ಜಗದೀಶ್, ಮನಿಷ್, ಪ್ರಿಯಾಂಕ ರಾವ್ ಯುವ ಜೋಡಿಗಳಾಗಿ ಇದ್ದಾರೆ. ರಮೇಶ್ ಪಂಡಿತ್, ಕಿಶೋರಿ ಬಲ್ಲಾಳ್, ರಮೇಶ್ ಭಟ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed